Sunday 2 December 2018

ಕಲಾಸಕ್ತಿಗೆ ಶ್ರಮದ ಶಕ್ತಿಯನ್ನು ಬೆರೆಸಿ ವಿಶ್ವವಂದ್ಯರಾದ ಕೆ.ಕೆ. ಹೆಬ್ಬಾರ್

ಅದು ಕಟ್ಟಿಂಗೇರಿಯ ಶೆಟ್ಟರೊಬ್ಬರ ಅಬ್ಬರದಮನೆಶೆಟ್ಟರ ಘನತೆ ಗಾಂಭೀರ‍್ಯ ಎಲ್ಲರಲ್ಲೂಗೌರವ ಮೂಡಿಸುತ್ತಿತ್ತು ಭಾರೀ ಮನೆಯಮುಖ್ಯದ್ವಾರದ ದಾರಂದದಲ್ಲಿ ಎಲ್ಲಿಂದಲೋತಂದ  ಮಣ್ಣಿನ ಗಿಳಿಗಳು ಮತ್ತಷ್ಟುಆಕರ್ಷಣೆಯನ್ನು ನೀಡುತ್ತಿದ್ದವು.ಬರುವವರೆಲ್ಲರೂ  ಗಿಳಿಗಳ ಸೊಬಗನ್ನುಬಣ್ಣಿಸದೆ ಹೋಗುತ್ತಿರಲಿಲ್ಲಹತ್ತಿರದಲ್ಲೇಗುಡಿಸಲಿನಲ್ಲಿ ವಾಸಿಸುತ್ತಿದ್ದ ಬಾಲಕನಿಗೂ ಗಿಳಿಗಳ ಬಗ್ಗೆ ವಿಶೇಷ ಆಸಕ್ತಿಅವುಗಳನ್ನುನೋಡಿದರೆ ನೋಡಿಯೇ ನಿಲ್ಲುತ್ತಿದ್ದಒಮ್ಮೆಅಚಾತುರ‍್ಯದಿಂದ ಶೆಟ್ಟರ ಮನೆಯ ಒಂದು ಗಿಳಿಕೆಳಗೆ ಬಿದ್ದು ಒಡೆದು ಹೋಯಿತುಶೆಟ್ಟರಿಗೆಹೃದಯವೇ ಒಡೆದಂತಾಯಿತುಬಂದುಹೋಗುವವರೆಲ್ಲರೂ ವಿಚಾರಿಸುವ ಒಂದು ಗಿಳಿಇನ್ನಿಲ್ಲವೆಂಬ ಕೊರಗು ಅವರನ್ನುಕಾಡತೊಡಗಿತುಹೀಗೆ ಚಿಂತೆಯಲ್ಲಿದ್ದಾಗಬಾಲಕನ ನಡುಗುವ ಕೈಯಲ್ಲಿ ಸ್ಫುರದ್ರೂಪಿ ಗಿಳಿಕುಣಿಯುತ್ತಿತ್ತುಒಡೆದ ಗಿಳಿಯತದ್ರೂಪದಂತೆಯೇ ಇದ್ದ ಅದನ್ನು ನೋಡಿಶೆಟ್ಟರಿಗೆ ಆನಂದವಾಯಿತುಬಾಲಕನನ್ನು ತಬ್ಬಿವಿಚಾರಿಸಿದಾಗ ಆತ ತಾನು ಆವೆ ಮಣ್ಣಿನಿಂದರಚಿಸಿದ ಗಿಳಿಯ ಬಗ್ಗೆ ವಿವರಿಸಿ ಅದನ್ನು ಶೆಟ್ರಿಗೆನೀಡಿದನು ಗಿಳಿಯನ್ನು ದಾರಂದದಲ್ಲಿಇರಿಸಿದ ಶೆಟ್ರ ಸಂಭ್ರಮಕ್ಕೆ ಪಾರವೇ ಇರಲಿಲ್ಲಬಾಲಕನಿಗೆ ಅವರು ಹರಿವಾಣದಲ್ಲಿ ವೀಳ್ಯ ಇಟ್ಟುಎರಡು ರುಸಂಭಾವನೆ  ನೀಡಿ ಹರಸಿದರು.ಬಾಲ್ಯದಲ್ಲೇ ಕಲಾಮಾತೆಯ ಕೃಪೆಗೆ ಪಾತ್ರನಾಗಿದ್ದ ಬಾಲಕನೇ ಇಂದು ವಿಶ್ವವಂದ್ಯರಾಗಿ,ಕಟ್ಟಿಂಗೇರಿಯ  ಪುಣ್ಯ ಭೂಮಿಯ ಹೆಸರನ್ನುಜಗದಗಲಕ್ಕೆ ವಿಸ್ತರಿಸಿದ  ನೆಲದ ಹೆಮ್ಮೆಯಸುಪುತ್ರ ಪದ್ಮಶ್ರೀಪದ್ಮಭೂಷಣ ಪುರಸ್ಕೃತಕಲಾಸಾಧಕ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್.ಯಾರೂ ಅರಿಯದ ಕಟ್ಟಿಂಗೇರಿಯ ಹೆಸರನ್ನು೨೦ನೇ ಶತಮಾನದ ದಶಕಗಳಲ್ಲಿ ಎಲ್ಲರಬಾಯಲ್ಲೂ ಇರುವಂತೆ ಮಾಡಿದವರು ಇದೇಕಟ್ಟಿಂಗೇರಿ ಕೃಷ್ಣ ಹೆಬ್ಬಾರ್.

ರೇಖೆಗಳಿಂದಲೇ ಮಾಯಾಲೋಕವನ್ನುಸೃಷ್ಟಿಸುತ್ತಿದ್ದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್‍ ಅವರು1911 ಜೂನ್ 15ರಂದು ಕಟ್ಟಿಂಗೇರಿ ಕೆರೆ ಬಳಿಯ ಮುಕ್ಕಾಲೆಕರೆ ಭೂಮಿಯಲ್ಲಿದ್ದ ಗುಡಿಸಲಿನಲ್ಲಿ ಕೆರೆಯ ಆವೆ ಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ರಚಿಸುತ್ತಿದ್ದ ನಾರಾಯಣಹೆಬ್ಬಾರ್ – ಸೀತಮ್ಮ ದಂಪತಿಯ ಮಗನಾಗಿಜನಿಸಿದರುಆರ್ಥಿಕ ಸಂಕಷ್ಟಕ್ಕೀಡಾಗಿಇದ್ದದ್ದನ್ನೂ ಕಳೆದುಕೊಂಡಿದ್ದ ನಾರಾಯಣಹೆಬ್ಬಾರ್ ದಂಪತಿಕಟ್ಟಿಂಗೇರಿಯಮುಕ್ಕಾಲೆಕರೆಯ ನೆಲದಲ್ಲಿ ದೇವಣ್ಣ ಪೈಗಳುನೀಡಿದ ಜಾಗದಲ್ಲಿ ಗುಡಿಸಲು ಕಟ್ಟಿಎಮ್ಮೆ ಸಾಕಿ,ಕೃಷಿ ಕೆಲಸದಲ್ಲಿ ಬದುಕು ಸಾಗಿಸುವಂತ್ತಾಗಿತ್ತು.ಇದಿಷ್ಟೇ ಕೆ.ಕೆಹೆಬ್ಬಾರ್ ಹುಟ್ಟುವಾಗ ಅವರಮನೆಯ ಇರಸ್ತಿಕೆಇದನ್ನು ಕು.ಶಿ. ಹರಿದಾಸ ಭಟ್ಟರು ದಾಖಲಿಸಿದ್ದಾರೆ.

ಇಂಥ ಕಷ್ಟದ ಕಾಲದಲ್ಲಿ ನೋವನ್ನೇ ಉಂಡು,ಮುಳ್ಳನ್ನೇ ಮೆಟ್ಟಿ ಬದುಕುತ್ತಿದ್ದರೂ ನಿರಂತರಸಾಧನೆಯಿಂದಛಲ ಬಿಡದ ತ್ರಿವಿಕ್ರಮನಂತೆತನ್ನೊಳಗಿದ್ದ ಕಲಾಸಕ್ತಿಗೆ ಶ್ರಮದ ಶಕ್ತಿಯನ್ನುಬೆರೆಸಿ ಕಲಾವಿದನಾಗಿಅದರಲ್ಲೂ ಜಗಮೆಚ್ಚಿದಕಲಾವಿದನಾಗಿ ಅರಳಿದವರು ಕೆ.ಕೆಹೆಬ್ಬಾರ್.


ಸಮೀಪದ ಮಿಶನ್ ಶಾಲೆಯಲ್ಲಿ (ಮಟ್ಟಾರು ಬಂಗ್ಲೆ ಶಾಲೆ) ಪ್ರಾಥಮಿಕ ಶಿಕ್ಷಣದ 5ವರ್ಷಗಳನ್ನು ಪೂರೈಸಿದ ಅವರುಶಾಲೆಯಲ್ಲಿಕಲಿತದ್ದಕ್ಕಿಂತ ಹೊರ ಜಗತ್ತಿನಲ್ಲಿ ಕಲಿತದ್ದು ಅವರಬದುಕಿಗೆ ಬೆಳಕಾಯಿತುಚಿನ್ನದ ಕೆಲಸದವನಓಟೆ ಕಸಿದುಕೊಂಡು ಆತನ ಅಗ್ಗಿಷ್ಟಿಕೆಊದುವುದುಆತನ ಕಂಬಚ್ಚಿಯನ್ನು ಒಂದುಕಡೆಯಿಂದ ಹಿಡಿದು ಒಕ್ಕನೂಲಿನ ತಂತಿಎಳೆಯುವುದುಕಮ್ಮಾರ ಶಾಲೆಯಲ್ಲಿತಿದಿಯೊತ್ತುವುದುಕುಂಬಾರನ ಬಳಿಯಿಂದಮಿದು ಮಣ್ಣನ್ನು ತಂದು ಕಲಾಕೃತಿಗಳನ್ನುರಚಿಸುವುದು ಹೀಗೆ ಅವರಿಗೆ ಕೈಯಕಸುಬುಗಳಲ್ಲಿದ್ದ ಪ್ರೀತಿ ಸೋಜಿಗ ತರುತ್ತಿತ್ತು.ಆದರೆ  ಕಾಲದಲ್ಲಿ ಇದೆಲ್ಲವನ್ನುಮೆಚ್ಚಿಕೊಳ್ಳುವವರಿದ್ದರಾದರೂ ಇದು ಆತನಜೀವನ ಬೆಳಗಬಲ್ಲದು ಎಂಬ ನಿಟ್ಟಿನಲ್ಲಿಯೋಚಿಸುವವರು ಇರಲಿಲ್ಲಆದರೆ ಪೋರನಅಂತಃಶಕ್ತಿ ಮಾತ್ರ ಭವಿಷ್ಯ ರೂಪಿಸುವ ಪ್ರೇರಣೆಈಯುತ್ತಲೇ ಇತ್ತು.

ತಾಯಿ ಸೀತಮ್ಮನ ಸಂಗಡ ಉಡುಪಿ ಕೃಷ್ಣದೇವಸ್ಥಾನಕ್ಕೆ ಹೋದಾಗ ದೇವಸ್ಥಾನದಮುಖಮಂಟಪದ ಗೋಡೆಯಲ್ಲಿ ರವಿವರ್ಮನಚಿತ್ರಗಳ ತದ್ಪ್ರತಿಗಳನ್ನು ಆಗತಾನೇ ಕೇರಳದಿಂದಕಲಿತು ಬಂದಿದ್ದ ಬಣ್ಣದ ರಾಮಣ್ಣ ಅವರುಬಿಡಿಸುತ್ತಿದ್ದುದನ್ನು ನೋಡಿರವಿವರ್ಮನಕಲಾಕೃತಿಗಳಿಂದ ಸ್ಫೂರ್ತಿ ಪಡೆದ ಹೆಬ್ಬಾರರು,ತಾನೂ ಇಂಥ ಚಿತ್ರಗಳನ್ನು ಬಿಡಿಸಬೇಕು ಎಂಬಗುರಿ ಹೊಂದಿದರುವಾಪಸ್ ಬರುವಾಗರವಿವರ್ಮನು ಬಿಡಿಸಿದ ‘ಸರಸ್ವತೀ’ ಮಾತೆಯಚಿತ್ರವನ್ನು ಕನ್ನಡಿ ಕಟ್ಟು ಹಾಕಿಸಿ ತಂದಿದ್ದ ಅವರು,ಮುಂಜಾನೆ ಯಾರೂ ಇಲ್ಲದ ಹೊತ್ತಿನಲ್ಲಿ ಗುಡ್ಡಕ್ಕೆಹೋಗಿ ಚಿತ್ರಕ್ಕೆ ಕೈಮುಗಿದು ‘ನನಗೂರವಿವರ್ಮನ ಹಾಗೆ ಚಿತ್ರ ಬರೆಯುವ ವಿದ್ಯೆಕೊಡಮ್ಮಾ’ ಎಂದು ಪ್ರಾರ್ಥಿಸಿದ್ದರುಹೀಗೆಬಾಲಕನ ಆಸಕ್ತಿಗೆ ಕಲಾಮಾತೆ ಒಲಿದು ಬಂದುಹರಸಿದರುಪ್ರಾಕೃತಿಕ ವರ್ಣಗಳಿಂದ ಗೋಡೆಗಳಮೇಲೆ ಅವರು ಚಿತ್ರ ಬಿಡಿಸಲು ಆರಂಭಿಸಿದ್ದುಇದೇ ಕಾಲಕ್ಕೆ.

ಬಡತನದ ಕಾರಣಕ್ಕೆ ಸ್ವಲ್ಪ ಸಮಯಮದರಾಸಿನಲ್ಲಿ ಉದ್ಯೋಗ ಮಾಡಿದ ಹೆಬ್ಬಾರರು(11 ವರ್ಷ ಪ್ರಾಯಕಲಿಯುವ ಇಚ್ಛೆಇದ್ದುದರಿಂದ ಅಲ್ಲಿ ನಿಲ್ಲಲಾಗದೆ ವಾಪಸ್ಬಂದರುಬಂದು ಸ್ವಲ್ಪ ಸಮಯ ಮಿಶನ್ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿಬಳಿಕಕುರ್ಕಾಲು ಗಣಪಯ್ಯ ಶೆಟ್ಟರ ಶಾಲೆಯಲ್ಲಿಎಂಟನೇ ತರಗತಿ ವರೆಗೆ ಕಲಿತರುಬಳಿಕಮಿಶನ್ ದೊರೆಯ ಮಾತಿನಂತೆ ಉಡುಪಿಯಮಿಶನ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸಆರಂಭಿಸಿದರುಸ್ವಲ್ಪ ಸಮಯ ಕಟ್ಟಿಂಗೇರಿ ಶಾಲೆಯಲ್ಲೂ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಒಂದಿಷ್ಟು ಸಮಯದ ಬಳಿಕ ಮುಂಬಯಿಗೆತೆರಳಿ ಅಲ್ಲಿ ಸ್ಟುಡಿಯೊವೊಂದರಲ್ಲಿ ಅವಿರತದುಡಿದು ಅದೇ ಹೊತ್ತಿನಲ್ಲಿ ಕಲಾಸಕ್ತಿಯಲ್ಲೂಮುಂದುವರಿದು ದಂಡಾವತಿ ಮಠರಕಲಾಮಂದಿರದಲ್ಲಿ ಗ್ರೇಡ್ ಪಡೆದರುಮುಂದೆಜೆ.ಜೆಸ್ಕೂಲಿನಲ್ಲಿ ಶಿಕ್ಷಣ ಮುಂದುವರಿಸಿ1938 ಹೊತ್ತಿಗೆ ಸ್ನಾತಕರಾದರು. ಪ್ಯಾರಿಸ್‍ ಸಹಿತ ವಿದೇಶಗಳಲ್ಲಿ ವಿದ್ಯಾಭ್ಯಾಸ ಪಡೆದರು. ಚಿತ್ರ ಮಾತ್ರವಲ್ಲದೆ ಕಥಕ್ ಕಲಾವಿದನಾಗಿಯೂಹೊರಹೊಮ್ಮಿದರುಹೀಗೆ ಮುಂದುವರಿದಅವರ ಕಲಾಯಾನ ವಿಶ್ವಖ್ಯಾತಿ ಪಡೆದು1996ರಲ್ಲಿ ಅನಂತವಾಯಿತು.

ಕೆಕೆ ಹೆಬ್ಬಾರ್‍ ಅವರ ಬಗ್ಗೆ ಖ್ಯಾತ ಜಾಹಾಂಗೀರ್‍ ನಿಕೋಲ್ಸನ್‍ ಆರ್ಟ್ ಫೌಂಡೇಶನ್‍ ವೆಬ್ ಸೈಟ್‍ ಈ ರೀತಿ ಹೇಳುತ್ತದೆ. “ಕೆಕೆ ಹೆಬ್ಬಾರ್ ಅವರು ತನ್ನ ಕಲಾವ್ಯಾಪ್ತಿಯನ್ನು ಪಾಶ್ಚಾತ್ಯ ಪರಿಧಿಗೂ ವಿಸ್ತರಿಸಿದ್ದರು. ಆದರೆ ಅವರ ಕಲೆಗಳ ಮೂಲ ಸೆಲೆ ಭಾರತೀಯ ಸಂಸ್ಕೃತಿಯೇ ಆಗಿತ್ತು. ಕರಾವಳಿಯ ಕೃಷಿ ಸಂಸ್ಕೃತಿ ಕುರಿತ ಅವರ ಚಿತ್ರಗಳು ಜಗತ್ಪ್ರಸಿದ್ಧವಾದವು. ಅವರ ಚಿತ್ರಗಳಲ್ಲಿ ಬಣ್ಣದೊಂದಿಗೆ ಲಯವೂ ಸಮ್ಮಿಳಿತವಾಗಿತ್ತು. ಅವರ ಚಿತ್ರಗಳು ಮಾತನಾಡುತ್ತಿದ್ದವು. ಲಯ ಸಾಧನೆಗೆ ಅವರು ಕಥಕ್‍ ನಾಟ್ಯವನ್ನೂ ಕಲಿತಿದ್ದರು. ಜೈನ, ಮುಗಲ್‍, ಅಜಂತಾ ಕಲೆ ಅವರ ಮೇಲೆ ಪ್ರಭಾವ ಬೀರಿತ್ತು. ಅವರ ಚಿತ್ರಗಳಲ್ಲಿ ಕಲಾತ್ಮಕತೆಯ ಸೊಬಗು ಹೇಗೆ ಅನಾವರಣಗೊಂಡಿತ್ತೋ ಅದರೊಂದಿಗೆ ಬಡತನ, ಹಸಿವು, ಯುದ್ಧಗಳ ಕರಾಳತೆ, ಅಣುಬಾಂಬ್‍ಗಳ ವಿನಾಶದ ಬಗ್ಗೆಯೂ ಬೆಳಕು ಚೆಲ್ಲಿದ್ದವು. ಸಂಗೀತ, ನಾಟ್ಯದ ಬಗ್ಗೆ ಅವರ ಆಸಕ್ತಿಯಾಗಿತ್ತು. ನಾಟ್ಯಗಾರರ ಭಾವಸ್ಫುರಣವನ್ನು ಅವರು ಚಿತ್ರಗಳಲ್ಲಿ ಸೆರೆ ಹಿಡಿಯುತ್ತಿದ್ದರು.

ಇಂಥ ಕೆಕೆ ಹೆಬ್ಬಾರ್‍ ಅವರಿಗೆ ಅವರು ಹುಟ್ಟಿದ ಈ ನೆಲದಲ್ಲಿ ಮತ್ತೆ ಬಾಗಿ ವಂದಿಸುತ್ತ, ಕೆಕೆ ಹೆಬ್ಬಾರ್‍ ಅವರ ಬಗ್ಗೆ ಮೂಡುಬೆಳ್ಳೆಯಲ್ಲಿ ಮೊಟ್ಟಮೊದಲ ಬಾರಿಗೆ "ಕೆಕೆ ಹೆಬ್ಬಾರ್ ಸಂಸ್ಮರಣ” ಕಾರ್ಯಕ್ರಮವನ್ನು ನಡೆಸಿ ಅವರ ಪರಿಚಯವನ್ನು ಇಂದಿನ ಪೀಳಿಗೆಯವರಾದ ನಮಗೆ ಮಾಡಿಕೊಟ್ಟ ಮತ್ತೋರ್ವ ಮೂಡುಬೆಳ್ಳೆಯ ಮುತ್ತು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುದ್ದು ಮೂಡುಬೆಳ್ಳೆಯವರಿಗೆ ನಮಸ್ಕರಿಸುತ್ತ ನನ್ನ ಮಾತುಗಳನ್ನು ಮುಗಿಸುತ್ತೇನೆ.

* ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

(ಡಿಸೆಂಬರ್  1ರಂದು ಎಡ್ಮೇರಿನಲ್ಲಿ ನಡೆದ ಕೆಕೆ ಹೆಬ್ಬಾರ್‍ ಹುಟ್ಟೂರ ಪ್ರಶಸ್ತಿ ಪ್ರದಾನದಲ್ಲಿ ಕೆಕೆ ಹೆಬ್ಬಾರ್ ಅವರಿಗೆ ಸಲ್ಲಿಸಿದ ನುಡಿನಮನ)

No comments:

Post a Comment